ವೈಟ್ ಫೀಲ್ಡ್ ಮೆಟ್ರೋ ಮಾರ್ಗ ವಿನ್ಯಾಸ ಬದಲಾಗುವ ಸಾಧ್ಯತೆ ಇದೆ | Oneindia Kannada

2017-12-20 142

ಬೆಂಗಳೂರು, ಡಿಸೆಂಬರ್ 19 : ನಗರದ ವೈಟ್ ಫೀಲ್ಡ್ ಗೆ ಮೆಟ್ರೋ ಸಂಪರ್ಕ ಕಲ್ಪಿಸುತ್ತಿರುವ ಬಿಎಂಆರ್ಸಿಎಲ್ , ಅರಣ್ಯ ಇಲಾಖೆ ಹಾಗೂ ರೈಲ್ವೆ ಇಲಾಖೆಯಿಂದ ಭೂಮಿ ಪಡೆಯುವ ವಿಚಾರದಲ್ಲಿ ಗೊಂದಲ ಎದುರಿಸುತ್ತಿದೆ.ಈಗಾಗಲೇ ನಗರದ ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಸಂದರ್ಭದಲ್ಲಿ ಬಿಎಂಆರ್ಸಿಎಲ್ ಗೆ ಸಾಕಷ್ಟು ಸಂಕಷ್ಟಗಳು ಎದುರಾದವು. ಕೆಆರ್. ಮಾರುಕಟ್ಟೆ ಬಳಿ ಕಟ್ಟಗಳಲ್ಲಿ ಬಿರುಕು, ಮೆಟ್ರೋ ಸುರಂಗ ಮಾರ್ಗ ಕೊರೆಯುವ ಯಂತ್ರ ಸಿಕ್ಕಿಹಾಕಿಕೊಂಡಿದ್ದು, ಕೆಂಪೇಗೌಡ ರಸ್ತೆಯಲ್ಲಿ ಮೆಟ್ರೋ ಸುರಂಗ ಮಾರ್ಗ ಕುಸಿದಿದ್ದು ಹೀಗೆ ಹಲವಾರು ಸಮಸ್ಯೆಗಳು ಎದುರಾಗಿದೆ.ಇದೀಗ ಸ್ಥಳದ ಸಮಸ್ಯೆಯೂ ಕೂಡ ಇದರೊಂದಿಗೆ ಸೇರಿಕೊಂಡಿದೆ. ಬೈಯ್ಯಪ್ಪನಹಳ್ಳಿ -ವೈಟ್ ಫೀಲ್ಡ್ ಮೆಟ್ರೊ,15.25 ಕಿ.ಮೀ ಉದ್ದದ ಮಾರ್ಗ, 78 ಎಕರೆ ಮೆಟ್ರೋ ನಿಲ್ದಾಣ, ಡಿಪೋ ಮಾರ್ಗಕ್ಕೆ ಇಷ್ಟು ಭೂಮಿ ಅಗತ್ಯವಿದೆ. ಬೈಯ್ಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ಗೆ 15.25 ಕಿ.ಮೀ.ಉದ್ದದ ಮೆಟ್ರೋ ಮಾರ್ಗ ನಿರ್ಮಿಸುತ್ತಿರುವ ಬಿಎಂಆರ್ಸಿಎಲ್, 78 ಎಕರೆಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದೆ. ಅದರಲ್ಲಿ 45 ಎಕರೆ ಅರಣ್ಯ ಇಲಾಖೆಗೆ ಸೇರಿದೆ. ಆದರೆ ಈ ಎರಡು ಇಲಾಖೆಗಳ ಜಾಗ ದೊರೆಯುವ ಬಗ್ಗೆ ದೃಢತೆಯಿಲ್ಲ. ಖಾಸಗಿಗಿಂತ ಸರ್ಕಾರಿ ಭೂಮಿ ಪಡೆಯುವುದು ಬಹಳ ಸುಲಭ ಎಂದು ಈ ಹಿಂದೆ ಬಿಎಂಆರ್ಸಿಎಲ್ ಎಂಡಿ ಪ್ರದೀಪ್ ಸಿಂಗ್ ಖರೋಲ ಹೇಳಿದ್ದರು.

Land acquisition trouble in Whitefield metro project: As forest department holds 45 ecres of land near Whitefield, the BMRCL has facing tough to acquire land for the Whitefield metro project.